 ಚಿತ್ರ: ಹೆಚ್.ಟು.ಓ
 ಸಂಗೀತ: ಸಾಧು ಕೋಕಿಲ
 ಸಾಹಿತ್ಯ: ಉಪೇಂದ್ರ
 ಗಾಯನ: ಕವಿತಾ ಸುಬ್ರಹ್ಮಣ್ಯಂ

ಹೂವೇ ಹೂವೇ ಹೂವೇ ಹೂವೇ
ಹೂವೇ ಹೂವೇ ಹೂವೇ ಹೂವೇ
ಹೂವೇ
ನಿನ್ನೀ ನಗುವಿಗೇ ಕಾರಣವೇನೇ
ಸೂರ್ಯನ ನಿಯಮಾನೇ..
ಓಹೋ...ಚಂದ್ರನ ನೆನಪೇನೇ..  {ಪಲ್ಲವಿ}

||ಹೂವೇ ಹೂವೇ||

ಆಭರಣದ ಅಂಗಡಿಗೇ ಹೋಗೋಣ ಗಿಳಿಮರಿಯೇ
ಮುದ್ದಾದ ಮೂಗಿಗೇ ಮೂಗುತಿ ಹಾಕುವೇ
ಸೀರೆಗಳ ಅಂಗಡಿಗೆ ಹೋಗೋಣ ಬಾ ನವಿಲೇ
ಸಿಂಗಾರ ಮಾಡಲೂ ನಿನ್ನಂತೇ ನನ್ನನೂ
ಮುಗಿಲೇ ಓ ಮುಗಿಲೇ
ಕೆನ್ನೆ ಕೆಂಪು ಏಕೇ
ನಿನ್ನಾ ನೋಡೋಕೇ ನಲ್ಲ ಬರುವನೇನೇ...
ಗಾಳಿ ಈ ತಂಪನೂ
ಕದ್ದೊಯ್ದೇ ಎಲ್ಲಿಗೇ ಕದ್ದೊಯ್ದೇ ಎಲ್ಲಿಗೇ 

||ಹೂವೇ ಹೂವೇ||

ಎರವಲು ಕೊಡಿ ರೆಕ್ಕೆಗಳಾ
ಓ ನನ್ನ ಹಕ್ಕಿಗಳೇ
ನಾನೊಮ್ಮೇ ಬಾನಿಗೆ ಹಾರಾಡಬೇಕಿದೇ
ಓಹೋ...ಗಡಿಬಿಡಿಯಾ ಇರುವೆಗಳೇ 
ಸಾಲಾಗಿ ಬನ್ನಿರೀ
ಒಬ್ಬಬ್ಬರಾಗಿಯೇ ಹೆಸರು ಹೇಳಿ ಹೋಗಿರಿ
ಜಿಂಕೆ ಓ ಜಿಂಕೆ
ನಿನ್ನ ಮೈಯಮೇಲೇ ಚುಕ್ಕಿ ಇಟ್ಟ ರಂಗೋಲೇ...
ಬೆಳದಿಂಗಳೂಟವಾ 
ಬಡಿಸೋನೇ ಚಂದ್ರಮಾ...ಬಡಿಸು ಬಾ ಚಂದ್ರಮ

||ಹೂವೇ ಹೂವೇ||

ವರ್ಗ: ಹೆಚ್.ಟು.ಓ ಚಿತ್ರ
ವರ್ಗ: ಕನ್ನಡ ಚಿತ್ರಸಾಹಿತ್ಯ
ವರ್ಗ: ಉಪೇಂದ್ರ ಸಾಹಿತ್ಯ
ವರ್ಗ: ಕವಿತಾ ಸುಬ್ರಹ್ಮಣ್ಯಂ ಗಾಯನ